Latest

Friday, July 10, 2020

Arere Avala Naguva Lyrics|Vasuki Vaibhav|Sarkari Hi. Pra. Shaale, Kasaragodu Songs Lyrics


Arere Avala Naguva - Vasuki Vaibhav Lyrics

Arere Avala Naguva Lyrics
Singer Vasuki Vaibhav
Music               Vasuki Vaibhav
Song Writer Avinash Balekkala

ಅರೆರೆ ಅವಳ ನಗುವ,
ನೋಡಿ ಮರೆತೆ ಜಗವ!
ಹಗಲು ಗನಸು ಮುಗಿಸಿ,
ಸಂಜೆ ಮೇಲೆ ಸಿಗುವ..

ಮುಸ್ಸಂಜೆಗೆ ಹಾಡಾಗಲು,
ತಂಗಾಳಿಯ ತಯಾರಿ..

ಸದ್ದಿಲ್ಲದೆ ಆ ಸೂರ್ಯನು..
ಬಾನಚೆಗೆ ಪರಾರಿ!

ಅವಳೆದುರು ಬಂದಾಗ,
ಎದೆ ಬಡಿತ ಜೋರಾಗಿ,
ಕೂಗೋ ಕೋಗಿಲೆ,
ಮನದ ಮಾಮರಕೆ ಮರಳಿದೆ..
ಮೈಗೂ ತರುವುದನೆ ಮರೆತಿದೆ!

ಹಾಡು ಹಗಲೇನೆ ಬಾನಲಿ,
ಮೂನು ದಾರಿಯ ತಪ್ಪಿದೆ..

ಈ ಹರೆಯವು ಬಳಿ ಬಂದರೆ,
ಬೋರ್ ವೆಲ್ಲಿಗೂ ಬಾಯರಿಕೆ!
ಈ ವಯಸಿಗೂ ಕನಸೆಲ್ಲವ,
ನನಸಾಗಿಸೊ ಕೈಗಾರಿಕೆ..

ಗಿಡ ಮರವಾಗೋ ವರ ದೊರೆತಾಗ,
ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ!
ಹೊಟ್ಟೆ ಒಳಗಿಂದ ಚಿಟ್ಟೆ ಹಾರಿದೆ!
ಓ…

ಬಿಸಿಲೇರೋ ಟೈಮಲ್ಲಿ,
ಬೀಸಿರಲು ತಂಗಾಳಿ,
ತೇಲೋ ಮೋಡವು..
ಮೂಡು ಬಂದ ಕಡೆ ಓಡಿದೆ,
ಗಾಳಿ ಮಾತನ್ನೆ ಕೇಳದೆ!

ಓಡೋ ಕಾಲದ ಕಾಲಿಗೆ,
ಕಾಲು ಗೆಜ್ಜೆಯ ಕಟ್ಟಿದೆ!
ದಿನ ಶಾಲೆಗೆ ಲೇಟಾದರೂ,
ತುಸು ನಾಚುತ ತಲೆ ಬಾಚಿದೆ.

ಕೊಳ ಪಟ್ಟಿಗೆ ಏಟಾದರೂ,
ನಸು ನಾಚುತ ಕೈ ಚಾಚಿದೆ!
ಎಳೆ ಹ್ರುದಯಕ್ಕೆ ಮಳೆ ಸುರಿದಾಗ,
ಮೀಸೆ ಅಂಚಲ್ಲಿ ಆಸೆ ಚಿಗುರಿದೆ,
ಬಂಚು ಬಂಚಾಗಿ ಕನಸು ಬಂದಿದೆ!

ಓ..
ಕಿರುನಗೆಯ ಥೇರನ್ನು,
ಕಣ್ಣಲ್ಲೆ ಎಳೆವಾಗ,
ರಾಶಿ ಕಾಮನೆ,
ಎದೆಯ ಬಾಗಿಲಿಗೆ ಬಂದಿದೆ!
ಏನೂ ಸುಳಿವನ್ನೆ ನೀಡದೆ!



No comments:

Post a Comment